ಪಕ್ಷಿಯ ಪರಿಚಯ : ಮಿಂಚುಳ್ಳಿಗಳ ಕುಟುಂಬವು ೧೧೪ ಜಾತಿಗಳನ್ನು ಹೊಂದಿವೆ, ಮಿಂಚುಳ್ಳಿಗಳು ನದಿ ಅಥವಾ ಸಾಗರದಲ್ಲಿ ಮೀನುಗಳನ್ನೂ ಹಿಡಿಯುವುದು ನಯನ ಮನೋಹರ ದೃಶ್ಯ. ಮಿಂಚುಳ್ಳಿಗಳ ಹೆಚ್ಚಿನ ಜಾತಿಯ ಮಿಂಚುಳ್ಳಿಗಳು ಲಿಂಗಗಳ ನಡುವಿನ ಸಣ್ಣ ವ್ಯತ್ಯಾಸದಿಂದ ಹೊಳಪಿನ ಗರಿಗಳನ್ನು ಹೊಂದಿವೆ. ಕೆಲವು ಜಾತಿಯ ಮಿಂಚುಳ್ಳಿಗಳು ಉಷ್ಣವಲಯದಲ್ಲಿ ವಾಸಿಸುತ್ತವೆ, ಮತ್ತು ಹೆಚ್ಚಿನವು ಕಾಡುಗಳಲ್ಲಿ ಮಾತ್ರ ಕಾಣಸಿಗಬಹುದು. ಮತ್ತು ನೀರಿನ ವಲಯದ ಸಮೀಪ ವಾಸಿಸುತ್ತವೆ.
ಪಕ್ಷಿಯ ರಚನೆ : ಮಿಂಚುಳ್ಳಿಗಳ ತೂಕವು ಸುಮಾರು ೧೫೦ಗ್ರಾಂ. ಎಲ್ಲಾ ಮಿಂಚುಳ್ಳಿಗಳು ದೊಡ್ಡ ತಲೆ, ಉದ್ದವಾದ ಮೊನಚಾದ ಕೊಕ್ಕನ್ನು, ಸಣ್ಣ ಕಾಲುಗಳು ಮತ್ತು ಬಾಲವನ್ನು ಹೊಂದಿರುತ್ತವೆ.ಅವುಗಳ ಕೊಕ್ಕಿನ ಕೆಳಗೆ ಗಂಟಲಿನ ಮೇಲೆ ಒಂದು ಚಿಕ್ಕ ಬಿಳಿ ಮಚ್ಛೆ ಇದೆ. ರೆಕ್ಕೆಗಳ ಬಣ್ಣವು ನೀಲಿ ಮತ್ತು ಹಸಿರು ಬಣ್ಣದಿಂದ, ಅವುಗಳ ಮೇಲ್ಭಾಗ ಮತ್ತು ಬಾಲವು ನೀಲಿ ಬಣ್ಣವನ್ನು ಹೊಂದಿರುತ್ತವೆ. ಅವುಗಳ ಕೆಳಭಾಗವು ಪ್ರಕಾಶಮಾನವಾದ ಕಿತ್ತಳೆ ಬಣ್ಣವನ್ನು ಹೊಂದಿವೆ.

ಪಕ್ಷಿಯ ಆಹಾರ ಕ್ರಮ : ಮಿಂಚುಳ್ಳಿಗಳು ಮುಖ್ಯವಾಗಿ ಮೀನುಗಳನ್ನು ಹಿಡಿದು ತಿನ್ನುತ್ತವೆ, ಸಣ್ಣ ಜಲಚರ ಜೀವಿಗಳನ್ನು ತಿನ್ನುತ್ತವೆ, ಮತ್ತು ಜಲ ಕೀಟಗಳು, ಸಿಹಿನೀರಿನ ಸೀಗಡಿಗಳು ಇತ್ಯಾದಿಗಳನ್ನು ತಿನ್ನುತ್ತವೆ.
ಪಕ್ಷಿಯ ಸಂತಾನ : ಮಿಂಚುಳ್ಳಿಗಳು ೩-೬ ಮೊಟ್ಟೆಗಳನ್ನು ಜೇಷ್ಠ ಮಾಸ ಕೊನೆಯಲ್ಲಿ ಅಥವಾ ಆಷಾಡ ಮಾಸ ಆರಂಭದಲ್ಲಿ ಹಾಕುತ್ತವೆ. ಎರಡೂ ಪೋಷಕ ಮಿಂಚುಳ್ಳಿಗಳು ಮೊಟ್ಟೆಗಳನ್ನು ಕಾವು ಕೊಡುತ್ತವೆ, ಮತ್ತು ಮರಿಗಳು ೧೯-೨೧ ದಿನಗಳ ನಂತರ ಹೊರಬರುತ್ತವೆ.ಮರಿಗಳು ೧ ವರ್ಷದಲ್ಲಿ ಪ್ರೌಡಾವಸ್ಥೆಗೆ ಬರುತ್ತವೆ.
ಪಕ್ಷಿಯ ಜೀವಿತಾವಧಿ : ಸರಾಸರಿ ಜೀವಿತಾವಧಿ ೧೪ ರಿಂದ ೧೫ ವರ್ಷಗಳು.
ಗಮನಿಸಿ : ನಿಮ್ಮ ಮನೆಯ ಹತ್ತಿರ ಇರುವ ಗೂಡುಗಳನ್ನು ರಕ್ಷಿಸಿ. ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಗೂಡುಗಳನ್ನು ಕಟ್ಟುವುದಕ್ಕೆ ಅನುಕೂಲಕರ ವಾತಾವರಣವನ್ನು ಬೆಳೆಸಿ. ಪಕ್ಷಿಗಳಿಗೆ ನಿಮ್ಮ ಮನೆಗಳ ಹತ್ತಿರ ಕುಡಿಯಲು ನೀರನ್ನು ಇಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ