ಪಕ್ಷಿಯ ಪರಿಚಯ : ಗುಬ್ಬಚ್ಚಿಯು ಪ್ರಪಂಚದಾದ್ಯಂತ ತನ್ನ ೩೦ ಜಾತಿಗಳನ್ನು ಹೊಂದಿವೆ.ಈ ಪುಟ್ಟ ಪಕ್ಷಿಗಳು ಸಾಮಾನ್ಯವಾಗಿ ಮನೆಗಳು, ಕಟ್ಟಡ,ಬಾವಿ,ಮತ್ತು ಇತರ ಪ್ರದೇಶಗಳಲ್ಲಿ ತನ್ನ ಗೂಡುಗಳನ್ನು ಕಟ್ಟುತ್ತವೆ. ಗುಬ್ಬಚ್ಚಿಯ ಪ್ರಭೇದಗಳು ಅತಿಹೆಚ್ಚು ಅಳಿವಿನಚ್ಚಿನಲ್ಲಿ ಇರುವ ಸಣ್ಣ ಪಕ್ಷಿಗಳಾಗಿವೆ. ಗುಬ್ಬಚ್ಚಿಗಳು ಗುಂಪಾಗಿ ವಾಸಿಸುತ್ತವೆ. ಪಕ್ಷಿಯ ರಚನೆ : ಗುಬ್ಬಚ್ಚಿಗಳು ನೋಡುವುದಕ್ಕೆ ಕಪ್ಪು,ಕಂದು ಮತ್ತು ಬಿಳಿ ಬಣ್ಣಗಳನ್ನು ಹೊಂದಿವೆ. ಗಂಡು ಮತ್ತು ಹೆಣ್ಣು ಪಕ್ಷಿಗಳನ್ನು ಪುಕ್ಕಗಳ ಬಣ್ಣದ ಮೇಲೆ ಗುರುತಿಸ ಬಹುದು. ಗಂಡು ಗುಬ್ಬಚ್ಚಿಯು ಬೆನ್ನಿನ ಮೇಲೆ ಕಪ್ಪು ಬಣ್ಣದಿಂದ ಮತ್ತು ಕೊಕ್ಕೆಯ ಕೆಳಗೆ ಕಪ್ಪು ಮಚ್ಛೇಯನ್ನು,ಹೆಣ್ಣು ಗುಬ್ಬಚ್ಚಿಯು ಬೆನ್ನಿನ ಮೇಲೆ ಕಂದು ಬಣ್ಣದಿಂದ ಕೊಡಿದೆ. ಪಕ್ಷಿಯ ಆಹಾರ ಕ್ರಮ : ಈ ಪಕ್ಷಿಗಳು ಸಾಮಾನ್ಯವಾಗಿ ದಾನ್ಯಗಳು. ಸಣ್ಣ ಚಿಟ್ಟೆ, ಹುಳುಗಳನ್ನು ತಿಂದು ಜೀವಿಸುತ್ತವೆ. ಮರಗಳ ಚಿಗುರು,ಸಣ್ಣ ಕಾಯಿ ಅಥವಾ ಹಣ್ಣುಗಳನ್ನು ಕೂಡ ತಿನ್ನುತ್ತವೆ. ಪಕ್ಷಿಯ ಸಂತಾನ : ಗುಬ್ಬಚ್ಚಿಗಳು ಸಾಮಾನ್ಯವಾಗಿ ವರ್ಷದ ಬೇಸಿಗೆ ಮತ್ತು ವಸಂತ ಕಾಲದಲ್ಲಿ ಗೂಡನ್ನು ಕಟ್ಟಿ ೪ ರಿಂದ ೭ ಮೊಟ್ಟೆಗಳನ್ನು ಹಾಕುತ್ತವೆ. ಆದರೆ ೪ ರಿಂದ ೫ ಮೊಟ್ಟೆಗಳನ್ನು ಇಡುವುದು ಸಾಮಾನ್ಯವಾಗಿದೆ. ಗುಬ್ಬಚ್ಚಿಯು ತನ್ನ ಮೊಟ್ಟೆಗಳಿಗೆ ಕಾವು ಕೊಟ್ಟು ೧೦ ರಿಂದ ೧೪ ದಿನಗಳ ನಂತರ...
ಪಕ್ಷಿ ಸಂಕುಲವನ್ನು ಉಳಿಸಿ. ಪಕ್ಷಿ ಮತ್ತು ಪರಿಸರ ಸಂರಕ್ಷಣೆ ನಮ್ಮೆಲರ ಕರ್ತವ್ಯ