ಪಕ್ಷಿಯ ಪರಿಚಯ : ಗಿಳಿಗಳಲ್ಲಿ ೪೦೦ ಪ್ರಭೇದದ ಪಕ್ಷಿಗಳಿದ್ದು ಅದರಲ್ಲಿ ಕೆಲವು ಪ್ರಭೇದಗಳು ಅಳಿವಿನಂಚಿನಲಿವೆ, ಗಿಳಿಗಳು ಬುದ್ಧಿವಂತ ಪಕ್ಷಿಗಳು,ಗಿಣಿಗಳನ್ನು ಭವಿಷ್ಯವಾಣಿ ಹೇಳುವುದಕ್ಕೆ ಸಾಕುವುದನ್ನು ಕಂಡಿದ್ದೇವೆ. ಮತ್ತು ಕೆಲವು ಪ್ರಭೇದಗಳು ಮಾನವನ ಧ್ವನಿಯಂತೆ ಮಾತನಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ ಮತ್ತು,ಅನೇಕ ಪ್ರಭೇದಗಳನ್ನುಸಾಕಣಿಕೆಯಲ್ಲಿ ಕಾಣಬಹುದು. ಪಕ್ಷಿಯ ರಚನೆ : ಗಿಳಿಗಳ ವಿಶಿಷ್ಟ ರಚೆನೆಯು ಬಲವಾದ ಬಾಗಿದ ಕೊಕ್ಕೆ ನೇರವಾದ ನಿಲುವು, ಬಲವಾದ ಕಾಲುಗಳನ್ನು ಹೊಂದಿದ್ದು. ಅನೇಕ ಗಿಳಿಗಳು ಹೊಳೆಯುವ ಬಣ್ಣವನ್ನು ಹೊಂದಿವೆ,ಮತ್ತು ಕೆಲವು ನಾನಾಬಣ್ಣಗಳಿಂದ ಕೂಡಿವೆ ಪಕ್ಷಿಯ ಆಹಾರ ಕ್ರಮ : ಗಿಳಿಗಳು ಸಸ್ಯಾಹಾರಿಗಳಾಗಿದ್ದು. ಈ ಪಕ್ಷಿಗಳು ಹಣ್ಣು, ಕಾಳಗಳು, ಸೂರ್ಯಕಾಂತಿ ಮತ್ತು ಕೆಲವು ದಾನ್ಯಗಳನ್ನು ತಿಂದು ಬದುಕುತ್ತವೆ ಪಕ್ಷಿಯ ಸಂತಾನ : ಗಿಳಿಗಳು ಎಲ್ಲ ಪಕ್ಷಿಗಳಂತೆ ಮೊಟ್ಟೆ ಹಾಕುತ್ತವೆ. ಮೊಟ್ಟೆ ಇಟ್ಟ ನಂತರ ೨೦ ರಿಂದ ೩೦ ದಿನಗಳು ಕಾವನ್ನು ಕೊಟ್ಟು ಮೊಟ್ಟೆಯೊಡೆದು ಮರಿಗಳು ಹೊರ ಬರುತ್ತವೆ. ಗಿಣಿಗಳ ಸಂತಾನವು ಪ್ರಭೇದದ ಮೇಲೆ ಮರಿಗಳಾಗುವುದರಲ್ಲಿ ವ್ಯತ್ಯಾಸತೇಯನ್ನು ಕಾಣಬಹುದು. ಪಕ್ಷಿಯ ಜೀವಿತಾವಧಿ : ಗಿಳಿಗಳ ವಯಸ್ಸು ಕೆಲವು ಪ್ರಭೇದಗಳ ಮೇಲೆ ಆಧಾರಿತವಾಗಿವೆ. ಕೆಲವು ಜಾತಿಯ ಗಿಳಿಗಳು ೮೦ ರಿಂದ ೧೦೦ ವರ್ಷಗಳ ಕಾಲ ಜೀವಿಸಬಲ್ಲವು.ಸಣ್ಣ (ಲವ್ ಬರ್ಡ್ಸ್) ಗಿಣ್ಣುಗಳು ೧೫ ರಿಂದ ೨೦ ವರ್ಷಗಳ ...
ಪಕ್ಷಿ ಸಂಕುಲವನ್ನು ಉಳಿಸಿ. ಪಕ್ಷಿ ಮತ್ತು ಪರಿಸರ ಸಂರಕ್ಷಣೆ ನಮ್ಮೆಲರ ಕರ್ತವ್ಯ