ಪಕ್ಷಿಯ ಪರಿಚಯ : ಗೀಜುಗವು ಪ್ಯಾಸರೀನ್ ಪಕ್ಷಿಗಳ ಕುಟುಂಬಕ್ಕೆ ಸೇರಿವೆ. ಇವುಗಳಲ್ಲಿ ಉತ್ತಮ ಗೂಡು ಕಟ್ಟುವ ನೇಕಾರ ಪಕ್ಷಿಗಳನ್ನು ಹೊಂದಿವೆ. ಸ್ನೇಹಿತರೆ ಈ ಪಕ್ಷಿಗಳ ವಿಶೇಷತೆ ಏನೆಂದರೆ ಇವುಗಳಲ್ಲಿ ಸುಂದರವಾಗಿ ಗೂಡುಗಳನ್ನು ಕಟ್ಟುತ್ತವೆ ಮತ್ತು ನಾವೆಲ್ಲ ನೋಡಿರುವ ಹಾಗೆ ಈ ಪಕ್ಷಿಗಳು ತನ್ನ ಗೂಡನ್ನು ಕಟ್ಟುವ ಸ್ಥಳದ ಕೆಳಗೆ ಅಪಾಯಕಾರಿ ಬಾವಿ. ಹಳ್ಳ. ನದಿ. ಮತ್ತು ತನ್ನ ಗೂಡನ್ನು ಯಾವುದೇ ತನ್ನ ಶತ್ರುಗಳಿಂದ ನಾಶಪಡಿಸಲು ಸಾಧ್ಯವಾಗದ ಸ್ಥಳಗಳಲ್ಲಿ ಕಟ್ಟುತ್ತವೆ.
ಪಕ್ಷಿಯ ರಚನೆ : ಗೀಜುಗವು ಹಲವು ಬಣ್ಣದ ಪುಕ್ಕಗಳಿಂದ ಕೂಡಿವೆ. ಹಳದಿ.ಬೂದು.ಬಿಳಿ.ಕಪ್ಪು ಕೆಲವು ಹಳದಿ,ಬೂದು ಮತ್ತು ಕಪ್ಪು ಬಣ್ಣದಾಗಿವೆ. ಹಾಗೂ ಕಪ್ಪು.ಬೂದು.ಬಿಳಿ ಬಣ್ಣದಾಗಿವೆ. ನೋಡುವುದಕ್ಕೆ ಸಣ್ಣ ಗುಬ್ಬಚ್ಚಿಯಾ ಹಾಗೆ ಕಾಣುತ್ತವೆ.
ಪಕ್ಷಿಯ ಆಹಾರ ಕ್ರಮ : ಈ ಪಕ್ಷಿಗಳ ಆಹಾರವು ಹುಲ್ಲು ಬೀಜಗಳು. ದಾನ್ಯ, ಹೂವುಗಳ ಮಕರಂದ, ಸಣ್ಣ ಕೀಟ ಅಥವಾ ಚಿಟ್ಟೆಗಳನ್ನು ತಿನ್ನುತ್ತವೆ
ಪಕ್ಷಿಯ ಸಂತಾನ : ಗೀಜುಗವು ಸಾಮನ್ಯವಾಗಿ ೨ ರಿಂದ ೪ ಮೊಟ್ಟೆಗಳನ್ನು ಹಾಕುತ್ತವೆ, ಹೆಣ್ಣು ಗೀಜುಗವು ಮೊಟ್ಟೆಗಳಿಗೆ ೧೨ ರಿಂದ ೧೫ ದಿನಗವರೆಗೆ ಕಾವನ್ನು ಕೊಟ್ಟು ಮರಿಗಳು ಹೊರಬಂದು, ೧೭ ರಿದ ೨೧ ದಿನಗಳ ನಂತರ ಮರಿಗಳು ಹೊರ ಹಾರುವುದನ್ನು ಕಲಿಯುತ್ತವೆ.
ಪಕ್ಷಿಯ ಜೀವಿತಾವಧಿ : ನೇಕಾರ ಗೀಜುಗವು ಕಾಡಿನಲ್ಲಿ ೧೦ರಿಂದ ೧೫ ವರ್ಷಗಳವರೆಗೆ ಜೀವಿಸುತ್ತವೆ, ಮತ್ತು ಹಳ್ಳಿಯ ಅಥವಾ ಪಂಜರದ ಗೀಜುಗವು ೨೦ ವರ್ಷಕ್ಕಿಂತ ಹೆಚ್ಚು ಬದುಕುತ್ತವೆ.
ನಮ್ಮ ಗುರಿ(goal) : ಸ್ನೇಹಿತರೆ ನಿಮ್ಮ ಮನೆಯ ಹತ್ತಿರ ಗಿಡಗಳನ್ನು ನೆಡಿ . ಮನೆಗೊಂದು ಮರ ಊರಿಗೊಂದು ವನ. ಮರಗಳಿಂದ ಪಕ್ಷಿಗಳ ವಾಸಕ್ಕೆ ಸಹಾಯವಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ