ಪಕ್ಷಿಯ ಪರಿಚಯ : ಮಿಂಚುಳ್ಳಿಗಳ ಕುಟುಂಬವು ೧೧೪ ಜಾತಿಗಳನ್ನು ಹೊಂದಿವೆ, ಮಿಂಚುಳ್ಳಿಗಳು ನದಿ ಅಥವಾ ಸಾಗರದಲ್ಲಿ ಮೀನುಗಳನ್ನೂ ಹಿಡಿಯುವುದು ನಯನ ಮನೋಹರ ದೃಶ್ಯ. ಮಿಂಚುಳ್ಳಿಗಳ ಹೆಚ್ಚಿನ ಜಾತಿಯ ಮಿಂಚುಳ್ಳಿಗಳು ಲಿಂಗಗಳ ನಡುವಿನ ಸಣ್ಣ ವ್ಯತ್ಯಾಸದಿಂದ ಹೊಳಪಿನ ಗರಿಗಳನ್ನು ಹೊಂದಿವೆ. ಕೆಲವು ಜಾತಿಯ ಮಿಂಚುಳ್ಳಿಗಳು ಉಷ್ಣವಲಯದಲ್ಲಿ ವಾಸಿಸುತ್ತವೆ, ಮತ್ತು ಹೆಚ್ಚಿನವು ಕಾಡುಗಳಲ್ಲಿ ಮಾತ್ರ ಕಾಣಸಿಗಬಹುದು. ಮತ್ತು ನೀರಿನ ವಲಯದ ಸಮೀಪ ವಾಸಿಸುತ್ತವೆ. ಪಕ್ಷಿಯ ರಚನೆ : ಮಿಂಚುಳ್ಳಿಗಳ ತೂಕವು ಸುಮಾರು ೧೫೦ಗ್ರಾಂ. ಎಲ್ಲಾ ಮಿಂಚುಳ್ಳಿಗಳು ದೊಡ್ಡ ತಲೆ, ಉದ್ದವಾದ ಮೊನಚಾದ ಕೊಕ್ಕನ್ನು, ಸಣ್ಣ ಕಾಲುಗಳು ಮತ್ತು ಬಾಲವನ್ನು ಹೊಂದಿರುತ್ತವೆ.ಅವುಗಳ ಕೊಕ್ಕಿನ ಕೆಳಗೆ ಗಂಟಲಿನ ಮೇಲೆ ಒಂದು ಚಿಕ್ಕ ಬಿಳಿ ಮಚ್ಛೆ ಇದೆ. ರೆಕ್ಕೆಗಳ ಬಣ್ಣವು ನೀಲಿ ಮತ್ತು ಹಸಿರು ಬಣ್ಣದಿಂದ, ಅವುಗಳ ಮೇಲ್ಭಾಗ ಮತ್ತು ಬಾಲವು ನೀಲಿ ಬಣ್ಣವನ್ನು ಹೊಂದಿರುತ್ತವೆ. ಅವುಗಳ ಕೆಳಭಾಗವು ಪ್ರಕಾಶಮಾನವಾದ ಕಿತ್ತಳೆ ಬಣ್ಣವನ್ನು ಹೊಂದಿವೆ. ಪಕ್ಷಿಯ ಆಹಾರ ಕ್ರಮ : ಮಿಂಚುಳ್ಳಿಗಳು ಮುಖ್ಯವಾಗಿ ಮೀನುಗಳನ್ನು ಹಿಡಿದು ತಿನ್ನುತ್ತವೆ, ಸಣ್ಣ ಜಲಚರ ಜೀವಿಗಳನ್ನು ತಿನ್ನುತ್ತವೆ, ಮತ್ತು ಜಲ ಕೀಟಗಳು, ಸಿಹಿನೀರಿನ ಸೀಗಡಿಗಳು ಇತ್ಯಾದಿಗಳನ್ನು ತಿನ್ನುತ್ತವೆ. ಪಕ್ಷಿಯ ಸಂತಾನ : ಮಿಂಚುಳ್ಳಿಗಳು ೩-೬ ಮೊಟ್ಟೆಗಳನ್ನು ಜೇಷ್ಠ ಮಾಸ ಕೊನೆಯಲ್ಲಿ ಅಥವಾ ಆಷಾಡ ಮಾಸ...
ಪಕ್ಷಿಯ ಪರಿಚಯ : ಹೆಚ್ಚಿನ ಗೂಬೆಗಳು ದೊಡ್ಡ ತಲೆಗಳನ್ನು , ನಯವಾದ ಗರಿಗಳು , ಸಣ್ಣ ಬಾಲ ಮತ್ತು ತನ್ನ ಕತ್ತನ್ನು ೩೬೦ ಡಿಗ್ರಿ ತಿರುಗಿಸಬಲ್ಲದು . ಗೂಬೆಯ ಕಣ್ಣುಗಳು ನೋಡುವುದಕ್ಕೆ ಭಯಾನಕವಾಗಿ ಕಾಣುತ್ತವೆ . ಬಹುತೇಕ ಗೂಬೆಯ ಪ್ರಭೇದಗಳು ಹಗಲಿನಲ್ಲಿ ಅಲ್ಲದೆ ರಾತ್ರಿಯಲ್ಲಿ ಹೆಚ್ಚುನವು ಚಲನ - ವಲನವನ್ನು ಹೊಂದಿವೆ . ಜಗತ್ತಿನಲ್ಲಿ ಸುಮಾರು ೨೦೦ ಕಿಂತ ಹೆಚ್ಚು ಜಾತಿಯ ಗೂಬೆಗಳಿವೆ . ಪಕ್ಷಿಯ ರಚನೆ : ಗೂಬೆಗಳ ಕಿವಿ - ರಂಧ್ರಗಳು ಮತ್ತು ದೊಡ್ಡದಾಗಿ ಕಾಣುವ ಕಣ್ಣುಗಳು , ಗಿಡುಗ ತರಹದ ಕೊಕ್ಕು , ಅಗಲವಾದ ಮುಖ , ಮತ್ತು ಸಾಮಾನ್ಯವಾಗಿ ಪ್ರತಿ ಕಣ್ಣಿನ ಸುತ್ತಲೂ ಎದ್ದು ಕಾಣುವ ಗರಿಗಳನ್ನು ಹೊಂದಿರುತ್ತವೆ . ಗರಿಗಳು ಕಪ್ಪು ಮತ್ತು ಬಿಳಿ ಬಣ್ಣದಿಂದ ಕೂಡಿವೆ . ಪಕ್ಷಿಯ ಆಹಾರ ಕ್ರಮ : ಗೂಬೆಗಳ ಆಹಾರವು ಸಣ್ಣ ಪಕ್ಷಿಗಳು , ಇಲಿ . ಓತಿಕೇತ ಮತ್ತು ಇತರೆ ಅಕಶೇರುಕಗಳು , ಸರೀಸೃಪಗಳು , ಉಭಯಚರಗಳು , ಮತ್ತು ಸಣ್ಣ ಸಸ್ತನಿಗಳು ಸೇರಿವೆ . ಪಕ್ಷಿಯ ಸಂತಾನ : ಗಂಡು ಮತ್ತು ಹೆಣ್ಣು ಗೂಬೆ ಮಿಲನವಾಗುತ್ತದೆ ವಯಸ್ಕ ಹೆಣ್ಣು ಗೂಬೆ ಮೊಟ್ಟೆಗಳನ್ನು ಹಾಕುತ್ತವೆ, ದೊಡ್ಡ ಗೂಬೆಗಳು ಕೇವಲ ಒಂದು ಅಥವಾ ಎರಡು ಮೊಟ್ಟೆಗಳನ್ನು ಇಡುತ್ತವೆ, ಆದರೆ ಸಣ್ಣ ಗೂಬೆಗಳು ಎಂಟರಿಂದ ಹತ್ತು ಮೊಟ್ಟೆಗಳನ್ನು ಹಾಕುತ್ತವೆ. ಗೂಬೆಗಳು ಮೊಟ್...